🔔🔔
ಅಷ್ಟಬಂಧ ಮತ್ತು ಕುಂಭಾಭಿಷೇಕ ಕಾರ್ಯಕ್ರಮ ಸಮಿತಿ, ವಿಶ್ವನಾಥಪುರ ಅಗ್ರಹಾರ
✦ ॐ ✦
Sringeri Acharya
ಅಗ್ರಹಾರದ ದೇವರುಗಳು
Deity Deity Deity Deity Deity Deity
Payment QR
💳 ಧನ ಸಹಾಯ
UPI ಮೂಲಕ ಧನ ಸಹಾಯ ಸಲ್ಲಿಸಿ
WhatsApp QR
📲 WhatsApp
ಮಾಹಿತಿಗಾಗಿ ಚಾನೆಲ್ ಸೇರಿ
Scan to Join Channel
ಅಷ್ಟಬಂಧ ಮತ್ತು ಕುಂಭಾಭಿಷೇಕ ಕಾರ್ಯಕ್ರಮ
ವಿಶ್ವನಾಥಪುರ ಅಗ್ರಹಾರ, ಉತ್ತಮೇಶ್ವರ, ಕೊಪ್ಪ ತಾಲ್ಲೂಕು
📅 ಏಪ್ರಿಲ್ 29, 2026
📍 ವಿಶ್ವನಾಥಪುರ ಅಗ್ರಹಾರ
ಈ ಮೂಲಕ ತಿಳಿಸುವುದೇನೆಂದರೆ, ಪವಿತ್ರ ತುಂಗಾ ನದಿ ತೀರದಲ್ಲಿರುವ ಶೃಂಗೇರಿ ಸಮೀಪದ ವಿಶ್ವನಾಥಪುರ ಅಗ್ರಹಾರದಲ್ಲಿ ಶ್ರೀಮತ್ಪರಮಹಂಸೇತ್ಯಾದಿ ಸಮಸ್ತ ಬಿರುದಾವಳಿ ವಿರಾಜಮಾನ ದಕ್ಷಿಣಾಮ್ನಾಯ ಶೃಂಗೇರಿ ಶ್ರೀ ಶಾರದಾ ಪೀಠಾಧೀಶ್ವರ ಜಗದ್ಗುರು ಶ್ರೀಶ್ರೀ ಭಾರತೀತೀರ್ಥ ಮಹಾಸನ್ನಿಧಾನಂಗಳವರ ಹಾಗೂ ತತ್ಕರಕಮಲಸಂಜಾತರಾದ ಜಗದ್ಗುರು ಶ್ರೀ ಶ್ರೀ ವಿಧುಶೇಖರಭಾರತೀ ಸನ್ನಿಧಾನಂಗಳವರ ಸಂಪೂರ್ಣ ಆಶೀರ್ವಾದದಿಂದ, ಸ್ವಸ್ತಿಶ್ರೀ ಪರಾಭವ ನಾಮ ಸಂವತ್ಸರದ ವೈಶಾಖ ಶುಕ್ಲ ತ್ರಯೋದಶಿ ಬುಧವಾರದಂದು (29.04.2026) ವಿಶ್ವನಾಥಪುರ ಅಗ್ರಹಾರದಲ್ಲಿ ಸಪರಿವಾರ ಗಂಗಾವಿಶ್ವೇಶ್ವರ ಮತ್ತು ಲಕ್ಷ್ಮೀವೆಂಕಟರಮಣಸ್ವಾಮಿಯ ಪುನಃಪ್ರತಿಷ್ಠಾ ಕುಂಭಾಭಿಷೇಕವನ್ನು ಜಗದ್ಗುರು ಶ್ರೀಶ್ರೀ ವಿಧುಶೇಖರಭಾರತೀ ಮಹಾಸ್ವಾಮಿಗಳವರು ತಮ್ಮ ಅಮೃತಹಸ್ತದಿಂದ ನೆರವೇರಿಸಿ ಆಶೀರ್ವದಿಸಲಿದ್ದಾರೆ.ತಾವುಗಳು ಆಗಮಿಸಿ ನಿಮ್ಮ ತನು-ಮನ-ಧನ ಸಹಾಯವನ್ನು ನೀಡಬೇಕೆಂದು ವಿನಂತಿಸುತ್ತೇವೆ.
ನಿಮ್ಮ ಸ್ನೇಹಿತರು ವಿಶ್ವಾಸಿಗಳಿಗೆ ಇದರ ಬಗ್ಗೆ ಮಾಹಿತಿ ಹಂಚಿಕೊಂಡು ಈ ಕಾರ್ಯಕ್ಕೆ ಸಹಕರಿಸಲು ವಿನಂತಿಸುತ್ತೇವೆ.
📋 ಕಾರ್ಯಕ್ರಮ ವೇಳಾಪಟ್ಟಿ — Program Schedule
ದಿನಾಂಕ ಕಾರ್ಯಕ್ರಮ
ಏಪ್ರಿಲ್ 27ಗುರುಪ್ರಾರ್ಥನೆ, ಗಣಪತಿ ಪೂಜೆ ಇತ್ಯಾದಿ.
ಏಪ್ರಿಲ್ 28ಕಲಶ ಸ್ಥಾಪನೆ, ಶಾಂತಿಕ ಪೌಷ್ಟಿಕ ಹೋಮ. ಅಧಿವಾಸ ಹೋಮ, ಇತ್ಯಾದಿ
ಏಪ್ರಿಲ್ 29ಪ್ರತಿಷ್ಠಾಂಗ ಹೋಮ, ಪೂಜಾಂಗ ಹೋಮ,ಕುಂಭಾಭಿಷೇಕ